ಬನಾನ ಪೂರಿ
ಇದು ಇಂದಿಗೂ ಪ್ರಸಿದ್ಧ ಮಂಗಳೂರು ಬನ್ಸ್ ಎಂದು
ಸವಿಯಲಿದನು ನಾವು ಸಿದ್ಧ, ಚಟ್ನಿ ಯೊಂದಿಗೆ ಇಂದು
ಆಕಾರ ನೋಡಿ ನನ್ನ ಮಗಳು ಮರುನಾಮಕರಣ ಮಾಡಿದಳಿದಕೆ ಬನಾನ ಪೂರಿ ಎಂದು
ಕದಳಿ ಫಲವ ಹಿಟ್ಟಿನೊಂದಿಗೆ ಹಿಸುಕಿ,
ಮಣೆಯ ಮೇಲೆ ಲಟ್ಟಿಸಿದಾಗ ಸಪೂರವಿದ್ದ ಈಕಿ,
ಕಾದೆಣ್ಣೆಗೆ ಬಿದ್ದೊಡೆ, ತಕ-ತಕ ಕುಣಿದು ಬಸಿರಾದ ನರ್ತಕಿ,
ಒಡನೆ ರುಚಿಯ ಸವಿಯೆ, ಚಟ್ನಿಯೊಡನೆ ಬಾಯಲಿ ತುರುಕಿ,
ಚುರ್ರ್ ಎಂದಿತು ನಾಲಗೆ ಬಿಸಿಯ ಪೂರಿಯ ಮೆಲುಕಿ…ಮೆಲುಕಿ…ಮೆಲುಕಿ….