Sahityapedia
Sign in
Home
Your Posts
QuoteWriter
Account
20 Oct 2024 · 1 min read

ನೀನೆಷ್ಟರ ಗಂಡಸು???

ನೀ ಹಸಿದಾಗ ತಾನುಂಡು

ಒದ್ದಾಗ ಸಂತಸಗೊಂಡು

ತನ್ನ ರಕ್ತವ ಬಸಿದು

ನಿನ್ನ ಭೂಮಿಗೆ ತಂದ ಜನನಿ…

ದುಡ್ಡಿಗಾಗಿ ನಿಂತವಳೇ??

ಅಮ್ಮಾ ಎಂದೂಡನೆ

ಓಡೋಡಿ ಧಾವಿಸುವ

ರೋಗದಿ ಹಾಸಿಗೆ ಹಿಡಿದಾಗ

ಹಗಲಿರುಳು ನಿನ್ನ ಪಾಲಿಸುವ ಅಮ್ಮಾ..

ದುಡ್ಡಿಗಾಗಿ ನಿಂತವಳೇ??

ಅತ್ತು ಗೋಳಿಡುವಾಗ

ಅಕ್ಕರೆಯ ನುಡಿಯಾಡುವ

ಸೋತು ಸೊರಗುವಾಗ

ಸಂತೈಸುವ ಸೋದರಿ..

ದುಡ್ಡಿಗಾಗಿ ನಿಂತವಳೇ??

ನಿನ್ನ ನೋವಿಗೆ ಕಿವಿಗೊಟ್ಟು

ಹೆಗಲಿಗೊರಗಿಸಿ ಧೈರ್ಯ ತುಂಬುವ

ನಿನ್ನ ಚೇಷ್ಟೆಗಳಿಗೆ

ಮುಗುಳ್ನಗುವ ಗೆಳತಿ..

ದುಡ್ಡಿಗಾಗಿ ನಿಂತವಳೇ??

ಮೂರು ಗಂಟಿಗೆ ತಲೆಬಾಗಿ

ತವರ ತೊರೆದು

ನಿನ್ನ ತೃಶೆಗೆ ಮೈಯೊಡ್ಡಿ

ಹೆಣಗುವ ಹೆಂಡತಿ

ದುಡ್ಡಿಗಾಗಿ ನಿಂತವಳೇ??

ತುಳಿದಷ್ಟೂ ಜೋಪಾನ ಮಾಡಿ

ಉತ್ತಷ್ಟೂ ಬೆಳೆ ನೀಡಿ

ಸತ್ತಾಗ ಮಡಿಲು ಕೊಡುವ

ಈ ಭೂಮಿ

ದುಡ್ಡಿಗಾಗಿ ನಿಂತವಳೇ??

ಜೀವನದ ಪ್ರತಿ ಕ್ಷಣವೂ

ಹೆಣ್ಣಿನ ಹಂಗಲ್ಲೇ ಬದುಕುವ

ಅವಳ ನೆರಳಲ್ಲಿ ಜೀವಿಸುವ

ಅವಳನ್ನೇ ದುಡ್ಡಿಗೆ ತೂಗುವ ನೀನು…

ನೀನೆಷ್ಟರ ಗಂಡಸು???

Loading...