Sahityapedia
Sign in
Home
Your Posts
QuoteWriter
Account
19 Oct 2024 · 1 min read

ಒಂದೇ ಆಸೆ....

ಪ್ರತಿ ಕ್ಷಣವೂ ನಿನ್ನ ಒಲವ ಮಳೆಯಲಿ ಮೀಯುವಾಸೆ..
ದಿನವೆಲ್ಲಾ ನಿನ್ನ ಬಳಿಯೇ ಇರುವಾಸೆ..
ಸೂರ್ಯೋದಯದ ಮೊದಲ ಅಪ್ಪುಗೆ ನಿನ್ನದೇ ಆಗಬೇಕೆಂಬ ಆಸೆ..
ಸೂರ್ಯಾಸ್ತದಿ ನಿನ್ನ ಎದೆಯ ಮೇಲೆ ನಿದ್ರಿಸುವಾಸೆ..
ನೀ ಎದುರಿರಲು ಪುಟ್ಟ ಮಗುವಾಗುವಾಸೆ..
ನಿನ್ನ ಅತಿಯಾಗಿ ಕಾಡುವ ಆಸೆ..
ಸದಾ ನಿನ್ನ ನಗುವ ಕಣ್ಣ್ತುಂಬಿಕೊಳ್ಳುವಾಸೆ..
ನಿನ್ನ ತುಂಟತನವ, ಸಹಿಸಲಾರದಷ್ಟು ಅನುಭವಿಸುವ ಆಸೆ..
ನೀ ಎದುರೇ ಇದ್ದರೂ ನಿನ್ನನ್ನೇ ನೆನೆವಾಸೆ ನನಗೆ…..
ನನದೊಂದೇ ಆಸೆ, ಅದುವೇ…
ನೀ ಮೆಚ್ಚುವ ಮಡದಿ ನಾನಾಗುವಾಸೆ….

…….✍️ಗೀಚಕಿ

Loading...