ನನ್ನಮ್ಮ
ಬದುಕಲಿ ನೀನುಂಡ ಪೆಟ್ಟುಗಳೆಷ್ಟೋ, ಸಹಿಸಿಕೊಂಡು ಸುಂದರ ಶಿಲ್ಪವಾದೆ…
ಜನರಾಡಿದ ಕೊಂಕುಗಳೆಷ್ಟೋ, ಅರಗಿಸಿಕೊಂಡು ಮುನ್ನಡೆದು ದಾರಿ ದೀಪವಾದೆ…
ಕಾಲ ಕೊಟ್ಟ ಕಷ್ಟಗಳೆಷ್ಟೋ, ಮೆಟ್ಟಿ ನಿಂತು ಗಟ್ಟಿಗಿತ್ತಿಯಾದೆ…
ವಿಧಿ ಹೂಡಿದ ಸಂಚುಗಳೆಷ್ಟೋ, ಮಿಂಚಂತೆ ಮರೆಮಾಚಿ ಮಾತೆಯಾದೆ…
ದ್ವೇಷ ಕಾರಿದ ಮನಗಳೆಷ್ಟೋ, ಪ್ರೀತಿ ಹಂಚಿ ತಾಯಿಯಾದೆ…
ನಾ ಮಾಡಿದ ತಪ್ಪುಗಳೆಷ್ಟೋ, ಮನ್ನಿಸಿ ದೇವಿಯಾದೆ…
ಎದುರಾದ ಸವಾಲುಗಳೆಷ್ಟೋ, ಧೈರ್ಯದಿ ಎದುರಿಸಿ ಆಧಾರ ಸ್ಥಂಭವಾದೆ…..
ನೂರು ಜನ್ಮವೆತ್ತಿದರೂ ನಾ,
ನಿನ್ನಂತೆ ನಾನಾಗಲಾರೆ ನನ್ನಮ್ಮ ….